ಟಂಗ್‍ಸ್ಟನ್
	ರಾಸಾಯನಿಕ ಧಾತು, ಪ್ರತೀಕ ತಿ, ಪರಮಾಣು ಸಂಖ್ಯೆ 74, ಪರಮಾಣು ತೂಕ 183.85. ಆವರ್ತಕೋಷ್ಟಕದ VI-B ಗುಂಪಿಗೆ ಸೇರಿದ ಸಂಕ್ರಮಣ ಲೋಹ. ಎಲೆಕ್ಟ್ರಾನ್ ವಿನ್ಯಾಸ [xe]4f145d46s2. ಈ ಧಾತುವಿನ ಸ್ಥಿರ ಸಮಸ್ಥಾನಿಗಳು (ಐಸೊಟೋಪ್ಸ್) ಒಂಬತ್ತು; ಅವುಗಳ ರಾಶಿ ಸಂಖ್ಯೆ 180, 182, 183, 184 ಮತ್ತು 186. ವಿಕಿರಣಪಟು ಸಮಸ್ಥಾನಿಗಳು ಒಂಬತ್ತು; ಇವುಗಳ ರಾಶಿ ಸಂಖ್ಯೆ 176, 177, 178, 179, 181, 183, 185 187 ಮತ್ತು 188. ಈ ಧಾತುವನ್ನು ವೂಲ್‍ಫ್ರಮ್ ಎಂದೂ ಕರೆಯುವರು. ಡಿ ಎಲ್ಯೂಯರ್ ಸಹೋದರರು 1783ರಲ್ಲಿ ಇದನ್ನು ಅವಿಷ್ಕರಿಸಿದರು. ಪ್ರಕೃತಿಯಲ್ಲಿ ಇದು ಟಂಗ್‍ಸ್ಟೇಟ್ ರೂಪದಲ್ಲಿ ದೊರೆಯುವುದು. ವೂಲ್‍ಫ್ರಮೈಟ್ (ಈeWಔ4 ಮತ್ತು ಒಟಿತಿo4 ಗಳ ಮಿಶ್ರಣ), ಶೀಲೈಟ್ (ಅಚಿತಿo4) ಮತ್ತು ಸ್ಟೋಲ್‍ಜೈಟ್ (PbWಔ4) ಇವು ಈ ಲೋಹದ ಮುಖ್ಯ ಅದುರುಗಳು. ಮೆಕ್ಸಿಕೋ, ಬೊಲೀವಿಯ, ಪೆರು, ಅರ್ಜೆಂಟೀನ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಈ ಲೋಹವನ್ನು ಉತ್ಪಾದಿಸುವ ದೇಶಗಳು.

	ತಯಾರಿಕೆಯ ವಿಧಾನ : ಲೋಹದ ಅದುರುಗಳನ್ನು ಯಾಂತ್ರಿಕ ಮತ್ತು ಕಾಂತೀಯ ವಿಧಾನಗಳಿಂದ ಸಾಂದ್ರೀಕರಿಸಿದ ಬಳಿಕ ಸೋಡಿಯಮ್ ಕಾರ್ಬೊನೇಟಿನೊಡನೆ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸಿ ದ್ರವೀಕರಿಸುವರು. ಇದನ್ನು ತಂಪುಗೊಳಿಸಿ ನೀರಿನಲ್ಲಿ ವಿಲೀನಗೊಳಿಸದಾಗ ಸೋಡಿಯಮ್ ಟಂಗ್‍ಸ್ಟೇಟ್ ದ್ರಾವಣ ದೊರೆಯುವುದು, ಇದಕ್ಕೆ ಆಮ್ಲವನ್ನು ಸೇರಿಸಿದಾಗ ಜಲಯುಕ್ತ ಟಂಗ್‍ಸ್ಟನ್ ಟ್ರೈ ಆಕ್ಸೈಡ್ (Wಔ3) ಅವಕ್ಷೇಪಿಸುವುದು (ಪ್ರೆಸಿಪಿಟೇಟ್ಸ್). ಇದನ್ನು ಬೇರ್ಪಡಿಸಿ ಶುಷ್ಕಗೊಳಿಸಿದ ತರುವಾಯ ಹೆಚ್ಚಿನ ಉಷ್ಣತೆಯಲ್ಲಿ ಹೈಡ್ರೋಜನ್ನಿನಿಂದ ಅಪಕರ್ಷಿಸಿದರೆ ಟಂಗ್‍ಸ್ಟನ್ ಉತ್ಪತ್ತಿಯಾಗುವುದು.

	ಗುಣಗಳು: ಪುಡಿಯ ರೂಪದ ಲೋಹಕ್ಕೆ ಮಾಸಲು ಬೂದು ಬಣ್ಣ ಉಂಟು. ಆದರೆ ದ್ರವೀಕರಿಸಿದ ಮೇಲೆ ದೊರಕುವ ಘನರೂಪದ ಲೋಹ ಬೆಳ್ಳಿಯಂತೆ ಬೆಳ್ಳಗೆ ಹೊಳೆಯುವುದು. ಈ ಲೋಹದ ಸಾಂದ್ರತೆ 18.0-19.3, g/mಟ.  ದ್ರವನ ಬಿಂದು 3410(24(ಅ, ಕುದಿಬಿಂದು 5727(20(ಅ. ಟಂಗ್‍ಸ್ಟನ್ ಅನುಕಾಂತೀಯ (ಪ್ಯಾರಾಮ್ಯಾಗ್ನೆಟಿಕ್) ಲೋಹ. ಇದಕ್ಕೆ ಬೆಳ್ಳಿಯ 30%ರಷ್ಟು ವಿದ್ಯುದ್ವಾಹಕ ಗುಣ ಉಂಟು.

	ರಾಸಾಯನಿಕವಾಗಿ ಟಂಗ್‍ಸ್ಟನ್ ಮೊಲಿಬ್ಡಿನಮ್ ಲೋಹವನ್ನು ಹೆಚ್ಚಾಗಿ ಹೋಲುವುದು. ಆಕ್ಸಿಜನ್ನಿನೊಡನೆ ಸಾಮಾನ್ಯ ಉಷ್ಣತೆಯಲ್ಲಿ ಟಂಗ್‍ಸ್ಟನ್ ವರ್ತಿಸುವುದಿಲ್ಲ. ಆದರೆ ಕೆಂಗಾವಿನಲ್ಲಿ ಅವು ವರ್ತಿಸಿದಾಗ ಟಂಗ್‍ಸ್ಟನ್ ಟ್ರೈ ಆಕ್ಸೈಡ್ (Wಔ3) ಉತ್ಪತ್ತಿಯಾಗುವುದು. ಪ್ಲೂರಿನ್ನಿನೊಡನೆ ಸಾಮಾನ್ಯ ಉಷ್ಣತೆಯಲ್ಲಿ ಕಾಸಿದಾಗ ಟಂಗ್‍ಸ್ಟನ್ ವರ್ತಿಸಿ ಟಂಗ್‍ಸ್ಟನ್ ಹೆಕ್ಸಪ್ಲೂರೈಡ್ (Wಅಟ4) ಸಂಯುಕ್ತವನ್ನೂ ಕೊಡುವುದು. ಆಮ್ಲಗಳು ಮತ್ತು ಕ್ಷಾರಗಳು ಈ ಲೋಹದೊಡನೆ ಸುಲಭವಾಗಿ ವರ್ತಿಸುವುದಿಲ್ಲ. ಆದರೆ ಹೈಡ್ರೊಪ್ಲೂರಿಕ್ (ಊಈ) ಮತ್ತು ನೈಟ್ರಿಕ್ (ಊಓಔ3) ಆಮ್ಲಗಳ ಮಿಶ್ರಣದಲ್ಲಿ ಇದು ವಿಲೀನಗೊಳ್ಳುವುದು. ಅಲ್ಲದೆ ತಂತಿಯ ರೂಪದಲ್ಲಿ ಹೈಡ್ರೋಜನ್ ಪೆರಾಕ್ಸೈಡಿನಲ್ಲಿ (ಊ2ಔ2) ಕೂಡ ಈ ಲೋಹ ವಿಲೀನವಾಗುವುದು.

	ಉಪಯೋಗಗಳು : ಈ ಲೋಹ ಅತ್ಯುಚ್ಚ ಉಷ್ಣತೆಯಲ್ಲೂ ಮೆದುವಾಗದೆ ತನ್ನ ಕಾಠಿಣ್ಯವನ್ನು ಉಳಿಸಿಕೊಂಡು ಸ್ಥಿರವಾಗಿರಬಲ್ಲದು. ಆದ್ದರಿಂದ ವಿದ್ಯದ್ವೀಪಗಳಲ್ಲಿ ತಂತುಗಳಾಗಿ, ಎಲೆಕ್ಟ್ರಾನ್ ನಳಿಗೆ ಮತ್ತು ಎಕ್ಸ್‍ಕಿರಣ ನಳಿಗೆಗಳಲ್ಲಿ ಲಕ್ಷ್ಯಗಳಾಗಿ ಇದರ ಉಪಯೋಗ ಉಂಟು. ಅಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಿಂದುಗಳಲ್ಲಿ ಕೂಡ ಈ ಲೋಹವನ್ನು ಹೆಚ್ಚಾಗಿ ಬಳಸುವರು. ಮಿಶ್ರಲೋಹಗಳಲ್ಲಿ ಮುಖ್ಯವಾಗಿ ಟಂಗ್‍ಸ್ಟನ್ ಉಕ್ಕುಗಳ ತಯಾರಿಕೆಯಲ್ಲಿ ಹೇರಳವಾಗಿ ಈ ಲೋಹಕ್ಕೆ ಬೇಡಿಕೆ ಇದೆ. ಉನ್ನತ ವೇಗದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುವ ಟಂಗ್‍ಸ್ಟನ್ ಉಕ್ಕುಗಳಲ್ಲಿ 2-22% ಟಂಗ್‍ಸ್ಟನ್ ಇರುವುದು. ಇವು ಅತಿಹೆಚ್ಚಿನ ಉಷ್ಣತೆ ಅಥವಾ ಕೆಂಗಾವಿನಲ್ಲಿಯೂ ಕರಗದೆ, ಮೆದುವಾಗಿ ತಮ್ಮ ಆಕಾರವನ್ನು ಕಳೆದುಕೊಳ್ಳದೆ, ಬೇಗನೆ ಸವೆಯದೆ ತಮ್ಮ ಕಾಠಿಣ್ಯಕೊಯ್ಯುವ ಉಪಕರಣಗಳು ಮತ್ತು ಕೊರೆಯಲು ಉಪಯೋಗಿಸುವ ಬೈರಿಗೆಗಳ ತಯಾರಿಕೆಯಲ್ಲಿ ಉಪಯೋಗಿಸುವರು.
	ಟಂಗ್‍ಸ್ಟನ್ನಿನ ಸಂಯುಕ್ತಗಳು : ಲೋಹದ 2, 4, 5 ಮತ್ತು 6ನೆಯ ಉತ್ಕಷಣ ಸ್ಥಿತಿಗಳ ಸಂಯುಕ್ತಗಳು ಮುಖ್ಯವಾದವು.

	ಆಕ್ಸೈಡುಗಳು : ಈ ಲೋಹದ ಆಕ್ಸೈಡುಗಳಲ್ಲಿ ಟಂಗ್‍ಸ್ಟನ್ ಡೈ ಆಕ್ಸೈಡ್ (Wಔ2) ಮತ್ತು ಟಂಗ್‍ಸ್ಟನ್ ಟ್ರೈ ಆಕ್ಸೈಡುಗಳು (Wಔ3) ಮುಖ್ಯವಾದವು. Wಔ3 ಯನ್ನು <43( ಅ ಉಷ್ಣತೆಯಲ್ಲಿ ಹೈಡ್ರೋಜನ್ನಿನಿಂದ ಅಪಕರ್ಷಿಸಿದಾಗ ಕಂದು ಬಣ್ಣದ Wಔ2 ಲಭ್ಯವಾಗುವುದು. ಈ ಲೋಹವನ್ನಾಗಲಿ ಅಥವಾ ಇದರ ಸಲ್ಫೈಡನ್ನಾಗಲಿ (WS2) ಆಕ್ಸಿಜನ್ನಿನ ವಾತಾವರಣದಲ್ಲಿ ಹೆಚ್ಚು ಉಷ್ಣತೆಯಲ್ಲಿ ಕಾಸಿದಾಗ ನಿಂಬೆಹಳದಿ ಬಣ್ಣದ ಟಂಗ್‍ಸ್ಟನ್ ಟ್ರೈ ಆಕ್ಸೈಡ್ (Wಔ3) ಉಂಟಾಗುವುದು.

	ಟಂಗ್‍ಸ್ಟನ್ ನೀಲಿ : ಇದು ಆಕ್ಸೈಡ್ ಮತ್ತು ಹೈಡ್ರಾಕ್ಸೈಡುಗಳನ್ನು ಒಳಗೊಂಡಿರುವ ವಸ್ತು. ಉದಾಹರಣೆಗೆ Wಔ2.67 (ಔಊ)0.33. ಟಂಗ್‍ಸ್ಟೇಟುಗಳು ಅಥವಾ ನೀರಿನಲ್ಲಿ ಕದಡಿರುವ Wಔ3 ನ್ನು ಸೌಮ್ಯ ಸ್ಥಿತಿಯಲ್ಲಿ Sಔ2 ಅಥವಾ ಓ2ಊ4 ಉಪಯೋಗಿಸಿ ಆಪಕರ್ಷಿಸಿದಾಗ ಟಂಗ್‍ಸ್ಟನ್ ನೀಲಿ ಉತ್ಪತ್ತಿಯಾಗುವುದು.

	ಹ್ಯಾಲೈಡುಗಳು : ಇವುಗಳಲ್ಲಿ ಮುಖ್ಯವಾದವುಗಳ ಸೂತ್ರಗಳು. Wಛಿಟ2 Wಛಿಟ4, Wಛಿಟ6, Wಈ2 ಮತ್ತು Wಈ2. ಆಕ್ಸೈಡ್ ಹ್ಯಾಲೈಡುಗಳಲ್ಲಿ ಮುಖ್ಯವಾದವು Wಔಅಟ3, Wಔ2ಅಟ2 ಮತ್ತು Wಔಅಟ4.

	ಸಲ್ಫೈಡುಗಳು : ಟಂಗ್‍ಸ್ಟನ್ ಡೈ ಸಲ್ಫೈಡ್ (WS2) ಮತ್ತು ಟ್ರೈಸಲ್ಫೈಡುಗಳು (WS3) ಮುಖ್ಯವಾದವು.

	ಅಂತರಾಕಾಶೀಯ (ಇಂಟರ್‍ಸ್ಪಿಷಿಯಲ್) ಸಂಯುಕ್ತಗಳು : ಬೋರಾನ್, ಕಾರ್ಬನ್, ನೈಟ್ರೋಜನ್ ಮತ್ತು ಸಿಲಿಕಾನ್À ಈ ಅಲೋಹ ಧಾತುಗಳೊಡನೆ ಹೆಚ್ಚಿನ ಉಷ್ಣತೆಯಲ್ಲಿ ಟಂಗ್‍ಸ್ಟನ್ ನೇರವಾಗಿ ವರ್ತಿಸಿ ಅತಿ ಹೆಚ್ಚು ಗಡಸಾದ ಮತ್ತು ರಾಸಾಯನಿಕವಾಗಿ ಜಡವಾದ ಅಂತರಾಕಾಶೀಯ ಸಂಯುಕ್ತಗಳನ್ನು ಕೊಡುವುದು. ಈ ಗುಣಗಳಿಂದ ಅವನ್ನು ಬೆಂಕಿಗೂಡುಗಳ, ಅನಿಲ ತಿರುಬಾನಿಗಳ, ಜೆಟ್ ಯಂತ್ರಗಳ ಮೂತಿಗಳ ಮತ್ತು ಕೊಯ್ಯುವ ಉಪಕರಣಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವರು. ಟಂಗ್‍ಸ್ಟನ್ ಕಾರ್ಬೈಡ್ (Wಅ) ಈ ಗುಂಪಿನ ಸಂಯುಕ್ತಗಳಲ್ಲಿ ಅತಿ ಮುಖ್ಯವಾದುದು. ಇದನ್ನು ವಿಶೇಷವಾಗಿ ಕೊಯ್ಯುವ ಉಪಕರಣಗಳು, ಬೈರಿಗೆ ಯಂತ್ರಗಳ ತುದಿಭಾಗಗಳು, ಜೆಟ್ ಯಂತ್ರಗಳ ಸೂಸುಮೂತಿ ಭಾಗಗಳ ತಯಾರಿಕೆಯಲ್ಲೂ ಉಷ್ಣರೋಧಕ ವಸ್ತುವಾಗಿ ಕುಲುಮೆಗಳಲ್ಲೂ ಉಪಯೋಗಿಸುವರು. ಟಂಗ್‍ಸ್ಟನ್ ಉಕ್ಕುಗಳ ವಿಶಿಷ್ಟ ಗುಣಗಳಿಗೆ ಅವನ್ನು ತಯಾರಿಸುವಾಗ ಉಂಟಾಗುವ ಟಂಗ್‍ಸ್ಟನ್ ಕಾರ್ಬೈಡೇ ಕಾರಣ.

	ಟಂಗ್‍ಸ್ಟೇಟ್‍ಗಳು : ಕ್ಷಾರೀಯ ಲೋಹಗಳ ಹೈಡ್ರಾಕ್ಸೈಡುಗಳೊಡನೆ Wಔ3 ವರ್ತಿಸಿದಾಗ ಉತ್ಪತ್ತಿಯಾಗುವ ಟಂಗ್‍ಸ್ಟೇಟ್ (ಒI2Wಔ4)ನ್ನು ಸ್ಫಟಿಕ ರೂಪದಲ್ಲಿ ಪಡೆಯಬಹುದು. ಈ ದ್ರಾವಣವನ್ನು ಹೆಚ್ಚು ಆಮ್ಲೀಯಗೊಳಿಸಿದಾಗ ಟಂಗ್‍ಸ್ಟಿಕ್ ಆಮ್ಲ (ಊ2Wಔ4) ಉಂಟಾಗುವುದು. ಸಾಮಾನ್ಯ ಉಷ್ಣತೆಯಲ್ಲಿ (Wಔ3. 2ಊ2ಔ)ವನ್ನು ಸ್ಫಟಕೀಕರಿಸಿ ಪಡೆಯಬಹುದು. ಟಂಗ್‍ಸ್ಟಿಕ್ ಆಮ್ಲ ಮತ್ತು ಇದರ ಸಂಕಲನ ಸಂಕೀರ್ಣಗಳನ್ನು (ಅಡಿಷನ್ ಕಾಂಪ್ಲೆಕ್ಸಸ್) ರಾಸಾಯನಿಕ ವಿಧಾನಗಳಲ್ಲಿ ವೇಗವರ್ಧಕಗಳಾಗಿಯೂ ಅವಕ್ಷೇಪಕಗಳಾಗಿಯೂ (ಪ್ರೆಸಿಪಿಟೆಂಟ್ಸ್) ಉಪಯೋಗಿಸುವರು.

	ಐಸೊಪಾಲಿ ಆಮ್ಲಗಳು, ಹೆಟಿರೊಪಾಲಿ ಆಮ್ಲಗಳು ಮತ್ತು ಅವುಗಳ ಲವಣಗಳನ್ನು ಉಂಟುಮಾಡುವುದೇ ಈ ಲೋಹದ ಅತಿ ಮುಖ್ಯವಾದ ವೈಶಿಷ್ಟಮಯ. ಐಸೊಪಾಲಿ ಟಂಗ್‍ಸ್ಟೇಟುಗಳಲ್ಲಿ ಕಾಣುವ ಮುಖ್ಯವಾದ ಋಣ ಅನುಯಾಯಿಗಳು : ಪ್ಯಾರಾಟಂಗ್‍ಸ್ಟೇಟ್ ಂ'_[ಊW6ಔ21]5_,  ಪ್ಯಾರಾಟಂಗ್‍ಸ್ಟೇಟ್ Z'_[W12ಔ41]10_, ಮತ್ತು ಮೆಟಾಟಂಗ್ ಸ್ಟೇಟ್ [W12ಔ39]6_, ಠಿಊ ಕಡಿಮೆಯಾದಂತೆಲ್ಲ ಈ ಅಯಾನುಗಳ ಒಟ್ಟುಗೂಡುವಿಕೆ ಹೆಚ್ಚಾಗುವುದು. ಹೆಟಿರೊಪಾಲಿಟಿಂಗ್ ಸ್ಟೇಟುಗಳಲ್ಲಿ ಟಂಗ್‍ಸ್ಟನ್ ಹೈಡ್ರೊಜನ್ ಮತ್ತು ಆಕ್ಸಿಜನ್ ಪರಮಾಣುಗಳ ಜೊತೆಗೆ ಬೇರೊಂದು ಧಾತುವಿನ ಒಂದು ಅಥವಾ ಹೆಚ್ಚು ಪರಮಾಣುಗಳಿರುತ್ತವೆ. ಉದಾಹರಣೆಗೆ [ಈe2 W12 ಔ42]6_, [ಅಔ2 W12  ಔ42]8_, ಮುಂತಾದವು. ಈ ಗುಂಪಿನ ಫಾಸ್ಟೊಟಂಗ್‍ಸ್ಟಿಕ್ ಆಮ್ಲವನ್ನು ರಕ್ತದ ವಿಶ್ಲೇಷಣೆಯಲ್ಲಿ ಪ್ರೋಟಿನ್ ಅವಕ್ಷೇಪಕಗಳಾಗಿ ಮತ್ತು ಕೆಲವು ಅಲ್ಕಲಾಯ್ಡುಗಳನ್ನು (ಉದಾಹರಣೆಗೆ ಕ್ವಿನೀನ್) ಗುರುತಿಸಲು ಉಪಯೋಗಿಸುವರು. ಅಲ್ಲದೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಸಹಾಯದಿಂದ ಜೀವಕೋಶಾಂಗಗಳ ಸೂಕ್ಷ್ಮ ರಚನೆಯನ್ನು ತಿಳಿಯಲು ಅವುಗಳಿಗೆ ವರ್ಣರಂಜನೆಯನ್ನುಂಟು ಮಾಡುವುದರಲ್ಲಿ ಫಾಸ್ಫೊ ಮತ್ತು ಸಿಲಿಕೊ ಟಂಗ್‍ಸ್ಟಿಕ್ ಆಮ್ಲಗಳು ನೆರವಾಗುವುವು.

	ಟಂಗ್‍ಸ್ಟನ್ ಕಂಚುಗಳು: ಸೋಡಿಯಮ್ ಟಂಗ್‍ಸ್ಟೇಟನ್ನು ಕೆಂಗಾವಿನ ಉಷ್ಣತೆಯಲ್ಲಿ ಹೈಡ್ರೊಜನ್ನಿನಿಂದ ಅಪಕರ್ಷಿಸಿದಾಗ ಉತ್ಪನ್ನವಾಗುವ ರಾಸಾಯನಿಕ ಜಡವಸ್ತು ಕಂಚಿನಂತಿರುವುದು. ಇವು ತಳ ಸಾಮಾನ್ಯ ಸೂತ್ರ :. ಈ ಕಂಚುಗಳ ಬಣ್ಣ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ. ಟಿ > 0.3 ಇರುವ ಟಂಗ್‍ಸ್ಟನ್ ಕಂಚುಗಳಲ್ಲಿಯ ಅತ್ಯಂತ ಜಡವಾದ ಲೋಹದ ಹೊಳಪುಳ್ಳ ಮತ್ತು ಒಳ್ಳೆಯ ವಿದ್ಯುದ್ವಾಹಕ ಗುಣವುಳ್ಳ ವಸ್ತುಗಳು. ಟಿ < 0.3 ಇರುವ ಕಂಚುಗಳು ಅರ್ಧವಿದ್ಯುದ್ವಾಹಕ ವಸ್ತುಗಳು.

	ಟಂಗ್‍ಸ್ಟನ್ನಿನ ಸಂಕೀರ್ಣಗಳು : ಈ ಲೋಹ 0, I, II, III, Iಗಿ, ಗಿ, ಮತ್ತು ಗಿI ಈ ಇಲ್ಲ ಉತ್ಕರ್ಷಣ ಸ್ಥಿತಿಗಳಲ್ಲಿಯೂ ಅನೇಕ ಸಂಕೀರ್ಣಗಳನ್ನು ಉಂಟುಮಾಡುವ ಸಾಮಥ್ರ್ಯವನ್ನು ಪಡೆದಿದೆ. ಬೇರೆ ಬೇರೆ ಲಿಗ್ಯಾಂಡ್ ಇರುವ ಟಂಗ್‍ಸ್ಟನ್ನಿನ ಸಂಕೀರ್ಣಗಳ ರಸಾಯನವಿಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿದೆ.
(ಎಂ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ